ಹತ್ಯೆ
=======
ನೇಣು ಹಾಕಿಕೊಳ್ಳಬೇಕು ಅಂತಾ ಫ್ಯಾನಿಗೆ ಹಗ್ಗ ಸಿಕ್ಕಿಸಿದ, ಕುತ್ತಿಗೆ ವರೆಗೂ ಉದ್ದ ಸಾಲುತ್ತ ಅಂತಾ ಒಮ್ಮೆ ನೋಡ್ ಕೊಂಡ ಕುತ್ತಿಗೆಗೆ ಹಗ್ಗ ಸಿಗಿಸಿ ಕೊಳ್ಳೋ ಮೊದಲು ಯೋಚನೆಗೆ ಬಿದ್ದ, ನಾ ಯಾಕ್ ಆತ್ಮಹತ್ಯೆಗೆ ಪ್ರಯತ್ನಿಸ್ತಾ ಇದ್ದೀನಿ ಅಂತ ಕಷ್ಟಗಳಿಗೆ ಹೆದರಿ ಸಾಯೋದಕ್ಕೆ ಹೊರಟಿದ್ದೀನಿ ಅಂತ ಅನ್ನಿಸ್ತು , ಆಮೇಲೆ ತಾನು ಅವಗಳನ್ನು ಎದುರಿಸೋಕಾಗದೆ ಇರೋ ಹೇಡಿ ಅಂತಾನು ಅನ್ನಿಸ್ತು.
ಈಗ ಅವನು ಯೋಚನೆಗ್ ಬಿದ್ದ ಎರಡರಲ್ಲಿ ಒಂದರ ಹತ್ಯೆ ಆಗಲೇ ಬೇಕಿತ್ತು .. ಒಂದು ತಾನು ನೇಣು ಹಾಕೊಂಡು ತನ್ನತನವ ಹತ್ಯೆ ಮಾಡೋದು , ಇನ್ನೊಂದು ಬದುಕಿದ್ದು ತನ್ನ ಹೇಡಿತನದ ಹತ್ಯೆ ಮಾಡೋದು ....
ಅಂತೂ ಆ ದಿನ ಒಂದು ಹತ್ಯೆ ನಡೆಯಿತು ...
ಈಗ ಅವನು ಆರಾಮವಾಗಿ ಎದೆ ಉಬ್ಬಿಸಿ ನಡೆದಾಡ್ತಾ ಇದ್ದಾನೆ, ಜೀವನವನ್ನ ಪ್ರೀತ್ಸೋಕ್ ಶುರು ಮಾಡಿದ್ದಾನೆ
No comments:
Post a Comment