ಮುಂಗುರುಳ
ಮೋಡಗಳ
ನಡುವೆ ಇರುವ
ಬೆಳದಿಂಗಳೇ
ಸರಿಸೆ
ತುಸು ತಲೆಯ
ಮೇಲಿರುವ ಸೆರಗ
ಈ ಮನದ
ಅಮಾವಾಸ್ಯೆಯ
ಕತ್ತಲು ತೊಲಗಲಿ
Tuesday, June 18, 2013
Monday, June 17, 2013
ತಾತ್ಕಾಲಿಕ ಶಾಶ್ವತ
ಕೆಲವು ಭಾವನೆಗಳು ತಾತ್ಕಾಲಿಕ
ಆದರೆ ನೆನಪುಗಳು ಶಾಶ್ವತ
ಕೆಲವು ನಗು ತಾತ್ಕಾಲಿಕ
ಆದರೆ ಅವು ತಂದ ಸಂತಸ ಶಾಶ್ವತ
ಕೆಲವು ಸ್ಪರ್ಶಗಳು ತಾತ್ಕಾಲಿಕ
ಆದರೆ ಅವುಗಳ ಅನುಭೂತಿ ಶಾಶ್ವತ
ಕೆಲವು ಅನುಭವಗಳು ತಾತ್ಕಾಲಿಕ
ಆದರೆ ಅದನನುಭವಿಸಿ ಬರೆದ ಕವನ ಶಾಶ್ವತ
ಆದರೆ ನೆನಪುಗಳು ಶಾಶ್ವತ
ಕೆಲವು ನಗು ತಾತ್ಕಾಲಿಕ
ಆದರೆ ಅವು ತಂದ ಸಂತಸ ಶಾಶ್ವತ
ಕೆಲವು ಸ್ಪರ್ಶಗಳು ತಾತ್ಕಾಲಿಕ
ಆದರೆ ಅವುಗಳ ಅನುಭೂತಿ ಶಾಶ್ವತ
ಕೆಲವು ಅನುಭವಗಳು ತಾತ್ಕಾಲಿಕ
ಆದರೆ ಅದನನುಭವಿಸಿ ಬರೆದ ಕವನ ಶಾಶ್ವತ
Sunday, June 16, 2013
8
ತಲೆ ತಗ್ಗಿಸದಿರಲು ಇರುವುದು
ಮೈ ಬಗ್ಗಿಸಿ ದುಡಿಯುವುದೊಂದೇ ದಾರಿ
ಮನ ನೊಯಿಸದಿರಲು ಇರುವುದು
ಮನವೊಲಿಸುವುದೊಂದೇ ದಾರಿ
ಸದಾ ಸ್ನೇಹದಿಂದಿರಲು ಇರುವುದು
ವಿಶ್ವಾಸವೊಂದೇ ದಾರಿ
ಮೈ ಬಗ್ಗಿಸಿ ದುಡಿಯುವುದೊಂದೇ ದಾರಿ
ಮನ ನೊಯಿಸದಿರಲು ಇರುವುದು
ಮನವೊಲಿಸುವುದೊಂದೇ ದಾರಿ
ಸದಾ ಸ್ನೇಹದಿಂದಿರಲು ಇರುವುದು
ವಿಶ್ವಾಸವೊಂದೇ ದಾರಿ
7
ನನ್ನ ಕಾಲು ಮುರಿದಿದೆ
ಆದರೆ ಕನಸುಗಳಲ್ಲ
ನನ್ನ ಕಲರವ ಅಡಗಿದೆ
ಆದರೆ ಕನವರಿಕೆಗಳಲ್ಲ
ನನ್ನ ಶಕ್ತಿ ಕುಗ್ಗಿದೆ
ಆದರೆ ಆತ್ಮವಿಶ್ವಾಸವಲ್ಲ
ಮತ್ತೆ ಏಳುವೆ
ಮತ್ತೆ ಪುಟಿಯುವೆ
ಮತ್ತೆ ಚಿಮ್ಮುವೆ
ಮತ್ತೆ ಹಾಡುವೆ
ಆದರೆ ಕನಸುಗಳಲ್ಲ
ನನ್ನ ಕಲರವ ಅಡಗಿದೆ
ಆದರೆ ಕನವರಿಕೆಗಳಲ್ಲ
ನನ್ನ ಶಕ್ತಿ ಕುಗ್ಗಿದೆ
ಆದರೆ ಆತ್ಮವಿಶ್ವಾಸವಲ್ಲ
ಮತ್ತೆ ಏಳುವೆ
ಮತ್ತೆ ಪುಟಿಯುವೆ
ಮತ್ತೆ ಚಿಮ್ಮುವೆ
ಮತ್ತೆ ಹಾಡುವೆ
4
ಪಡುವಣದಲ್ಲಿ ಮುಳುಗುವ
ಕೆಂಪು ಕೆಂಪಾದ ಸೂರ್ಯ
ಕಾಣುವನು ಸೇಬಿನಂತೆ
ಗೆಳತಿಯನ್ನು ಕಾಣಲು ಹೋಗುವ
ಹದಿ ಹರೆಯದ ಪೋರ
ಹೊಸ ಕಾಂತಿ ಹೊಂದಿದಂತೆ
ಕೆಂಪು ಕೆಂಪಾದ ಸೂರ್ಯ
ಕಾಣುವನು ಸೇಬಿನಂತೆ
ಗೆಳತಿಯನ್ನು ಕಾಣಲು ಹೋಗುವ
ಹದಿ ಹರೆಯದ ಪೋರ
ಹೊಸ ಕಾಂತಿ ಹೊಂದಿದಂತೆ
ಹತ್ಯೆ
ಹತ್ಯೆ
=======
ನೇಣು ಹಾಕಿಕೊಳ್ಳಬೇಕು ಅಂತಾ ಫ್ಯಾನಿಗೆ ಹಗ್ಗ ಸಿಕ್ಕಿಸಿದ, ಕುತ್ತಿಗೆ ವರೆಗೂ ಉದ್ದ ಸಾಲುತ್ತ ಅಂತಾ ಒಮ್ಮೆ ನೋಡ್ ಕೊಂಡ ಕುತ್ತಿಗೆಗೆ ಹಗ್ಗ ಸಿಗಿಸಿ ಕೊಳ್ಳೋ ಮೊದಲು ಯೋಚನೆಗೆ ಬಿದ್ದ, ನಾ ಯಾಕ್ ಆತ್ಮಹತ್ಯೆಗೆ ಪ್ರಯತ್ನಿಸ್ತಾ ಇದ್ದೀನಿ ಅಂತ ಕಷ್ಟಗಳಿಗೆ ಹೆದರಿ ಸಾಯೋದಕ್ಕೆ ಹೊರಟಿದ್ದೀನಿ ಅಂತ ಅನ್ನಿಸ್ತು , ಆಮೇಲೆ ತಾನು ಅವಗಳನ್ನು ಎದುರಿಸೋಕಾಗದೆ ಇರೋ ಹೇಡಿ ಅಂತಾನು ಅನ್ನಿಸ್ತು.
ಈಗ ಅವನು ಯೋಚನೆಗ್ ಬಿದ್ದ ಎರಡರಲ್ಲಿ ಒಂದರ ಹತ್ಯೆ ಆಗಲೇ ಬೇಕಿತ್ತು .. ಒಂದು ತಾನು ನೇಣು ಹಾಕೊಂಡು ತನ್ನತನವ ಹತ್ಯೆ ಮಾಡೋದು , ಇನ್ನೊಂದು ಬದುಕಿದ್ದು ತನ್ನ ಹೇಡಿತನದ ಹತ್ಯೆ ಮಾಡೋದು ....
ಅಂತೂ ಆ ದಿನ ಒಂದು ಹತ್ಯೆ ನಡೆಯಿತು ...
ಈಗ ಅವನು ಆರಾಮವಾಗಿ ಎದೆ ಉಬ್ಬಿಸಿ ನಡೆದಾಡ್ತಾ ಇದ್ದಾನೆ, ಜೀವನವನ್ನ ಪ್ರೀತ್ಸೋಕ್ ಶುರು ಮಾಡಿದ್ದಾನೆ

Subscribe to:
Posts (Atom)