ಹೀಗೊಂದು
ನೆಪ.
“ನಾನು
ನನ್ನ ಸೆಲ್ ಫೋನ್ ವಾಟರ್ ಪ್ರೂಫ್ ಹೌದೋ ಅಲ್ವೋಅಂತ ಟೆಸ್ಟ್ ಮಾಡೋಕೆ ಶವರ್ ಕೆಳಗೆ ಹಿಡ್ಕೊಂಡಿದ್ದೆ,
ಆಮೇಲೆ ನೀರ ಹನಿಗಳು ಏನಾದ್ರೂ ಉಳಕೊಂಡಿರಬಹುದು ಅಂತ ಚೆನ್ನಾಗಿ ಅಲ್ಲಾಡಿಸಿದೆ, ಆಗ ಆಕಸ್ಮಿಕವಾಗಿ
ಕ್ಯಾಮರ ಚಾಲೂ ಆಗಿ ಅವಳ ಫೋಟೋ ಹಿಡಿದಿರಬಹುದು” ಎಂದು ಜಾಕ್ ಹಾರ್ಡಿ ಎನ್ನುವ 18 ವರ್ಷದ ಯುವಕ ಪೋಲಿಸರಿಗೆ ಹೇಳಿದ.
ಸಾರ್ವಜನಿಕ ಸ್ವಿಮ್ಮಿಂಗ್ ಪೂಲಿನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರು ಇವನು ಮೊಬೈಲಿನಲ್ಲಿ
ಫೋಟೋ ಕ್ಲಿಕ್ಕಿಸುತ್ತಿದ್ದನ್ನು ಗಮನಿಸಿ ಪೋಲಿಸರಿಗೆ ದೂರು ನೀಡಿದ್ದರು. ಇದು ನಡೆದದ್ದು ಇಂಗ್ಲೆಂಡಿನಲ್ಲಿರುವ
ಎಕ್ಸ್ ಟರ್ ಎನ್ನುವ ಊರಿನಲ್ಲಿ.
ಆಮೇಲೆ ಅವನ ವಕೀಲರ ಸಲಹೆ ಮೇರೆಗೆ ಈ ಸುಳ್ಳನ್ನು ಹೇಳದೆ ತಾನು ಫೋಟೊ ಕ್ಲಿಕ್ಕಿಸಿ ಸುಖಿಸಿತ್ತಿದ್ದೆನೆಂದು ಕೋರ್ಟಿನಲ್ಲಿ ತಪ್ಪನ್ನು ಒಪ್ಪಿಕೊಂಡ. ಅವನಿಗೆ 18 ತಿಂಗಳುಗಳ ಸಾಧಾರಣ ಶಿಕ್ಷೆ ಮತ್ತು 150 ಪೌಂಡುಗಳ ಜುಲ್ಮಾನೆಯನ್ನು ಮತ್ತು ಲೈಂಗಿಕಅಪರಾಧೀ ಎಂದು ಐದು ವರ್ಷಗಳವರೆಗೆ ಕೋರ್ಟಿನಲ್ಲಿ ದಾಖಲಾತಿ ಇರುವಂತೆ ಆದೇಶಿಸಲಾಯಿತು.
ಆ ಮೊಬೈಲ್ ಫೋನಿನ ಗತಿ? ಅದನ್ನ ನಾಶಪಡಿಸಲಾಯಿತು.
2 comments:
ತುಸು ನಮ್ಮ ಎಡಿಜಿಪಿ ಪುರಾಣಕೆ ಹತ್ತಿರವಿರುವ ಕಥನ ಅಲ್ಲವೇ ಇದು!
ಹ ಹ ಹ ಹೌದು . ಬದರಿ ಬ್ರದರ್
Post a Comment