ಅಮೇರಿಕದ ಐಯೋವಾ ನಗರದ ನಿವಾಸಿ ಡೆರಿಕ್ ಎನ್ನುವವರಿಗೆ ತುಂಬಾ ಕೋಪ ಬಂದಿತ್ತು.
ಪುರಭವನದ ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ್ದ ತನ್ನ ಕಾರಿಗೆ ಪಾರ್ಕಿಂಗ್ ಶುಲ್ಕ ಕೊಡಲು ಸುತಾರಾಂ
ಇಷ್ಟವಿರಲಿಲ್ಲ, ಒಪ್ಪಲಿಲ್ಲ.
ಶುಲ್ಕ ಪಾವತಿಸುವ ಸ್ಥಳಕ್ಕೆ ಹೋಗಿ ಅಲ್ಲಿದ್ದವಳಿಗೆ ಹೇಳಿದ “ನಿಮ್ಮ ಪಾರ್ಕಿಂಗ್
ಅಟೆಂಡೆಂಟ್ ನನ್ನ ಕಾರಿನ ಡಿಕ್ಕಿಯಲ್ಲಿದ್ದಾನೆ, ನಿಮಗೆ ಅವನು ಜೀವಂತವಾಗಿ ಬೇಕಾ ಅಥವಾ ಹೆಣವಾಗಿನಾ
?” ಅವಳು ಕೂಡಲೇ ಪೋಲೀಸರನ್ನು ಫೋನಾಯಿಸಿ ಕರೆದಳು.
ಪೋಲೀಸರು ಅವನೊಡನೆ ಮಾತನಾಡಿ ಅವನ ದೂರ್ವಾಸ ಕೋಪವನ್ನು ಗಮನಿಸಿದ ನಂತರ , ಜೀವ ಬೆದರಿಕೆ ಮತ್ತು ದುರ್ನಡತೆಯ ಆರೋಪದ ಮೇಲೆ ಬಂಧಿಸಿದರು.
1 comment:
ಶಾಸಕರು, ಸಂಸದರಿರಲಿ ಅವರ ಚೇಲಾಗಳೂ ಜಗಳ ಕಾಯೋ ರೀತಿ ನೋಡಬೇಕು. ಅದು ಕಿರು ಕುರುಕ್ಸೇತ್ರ, ಕರ್ಣಾನಂದ!
Post a Comment