Tuesday, November 13, 2012

1


ನಾ ಕಾದೆ ಕಾದೆ 
ನಿನ್ನ ಪ್ರೀತಿ 
ಅರಿವಾಗುವಷ್ಟರಲ್ಲಿ 
ನಾ  ಅರಳುಮರುಳಾದೆ 

Wednesday, November 7, 2012

ಮನ

ಮರಗಟ್ಟಿಹುದು ಮನವು

ಮನದನ್ನೆಯ


ನೆನೆ ನೆನೆದು

ಹಾಸ್ಯ 1

ಮಟ ಮಟ ಮದ್ಯಾಹ್ನ ಅವ್ನು ಹಾಯಾಗ್ ಹೊಂಗೆ ಮರದ್ ಕೆಳಗೆ ಬಿದ್ಕೊಂಡಿದ್ದ, 
ಅಂಗೆ ಕಣ್ ಭಾರ ಆಯ್ತು , ನಿದ್ದೆ ಬಂತು , ಕನಸ್ ಬೀಳೊಕ್ ಶುರು ಆಯ್ತು. 

ನೋಡ್ ನೋಡುತ್ಲೇ ಅವನ್ ಮುಂದೆ ಮೇನಕೆ ಬಂದು ನಿಂತಂಗಾಯ್ತು , ಆಮೇಲೆ ಪಕ್ಕದಲ್ಲಿ ಮಲಗ್ದಂಗಾಯ್ತು . 

ಇವ್ನು ಅವಳನ ಮ್ಯಾಕಿಂದ ಕೇಳೀಕೊರ್ಗು ನೋಡ್ದಾ , ಶ್ಯಾನೆ ಚೆನ್ದಾಗಿದ್ಲು , ಮುಖ ಹತ್ರ ತಂದ್ಲು, 

ಯಾವ್ ಕಂಪನಿ ಲಿಪ್ ಸ್ಟಿಕ್ ಹಾಕಿದ್ಲೋ , ತುಟಿ ಸ್ಯಾನೆ ಸೆಂದಾಕ್ ಇತ್ತು , 

ಇವ್ನು ಬಾಯ್ ಬಿಡೋಕ್ ಮುಂಚೆ , ಅವ್ಳು ಇವ್ನಿಗೆ ಮುತ್ತು ಕೊಡೋಕ್ ಶುರು ಮಾಡುದ್ಲು , 


ಇವ್ನು ಚಡಪಡಾಯ್ಸ್ ಬುಟ್ಟ , ಇವನ್ ತುಟಿ ತೇವ ಆಗೋಯ್ತು, ಮೂಗೂನು ತೇವ ಆಗೋಕೆ ಶುರು ಆಯ್ತು , 


............
ಟಕ್ ಅಂತ ಕಣ್ ಬಿಟ್ಟ ... ...ಮ್ಯಾಕೆ ಅವನ್ ಮೂತಿ ನೆಕ್ ತಾ ಇತ್ತು

Archibald MacLeish, Poet,ಆರ್ಚಿಬಾಲ್ದ್ ಮ್ಯಾಕ್ ಲೀಶ್ ಎನ್ನುವಂತೆ ಕವಿತೆ

ಆರ್ಚಿಬಾಲ್ದ್ ಮ್ಯಾಕ್ ಲೀಶ್ ಎನ್ನುವಂತೆ ಕವಿತೆ 

=======================

ಪದ್ಯ ಪದವಿಲ್ಲದಿರಬೇಕು


ಹೆಜ್ಜೆಗುರುತು ಇಲ್ಲದೆ ಪಕ್ಷಿ ಹಾರುವಂತೆ 

ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು 


ಏರುವ ಚಂದ್ರನಂತೆ 


ಹೇಳಕೂಡದು 


ಇರಬೇಕು 




**ಯು ಆರ್ ಅನಂತಮೂರ್ತಿ **

ಪ್ರೀತಿ ಮತ್ತು ಕರ್ತವ್ಯ

ಪ್ರೀತಿ ಮತ್ತು ಕರ್ತವ್ಯ 
============

ಒಂದು ಬೆಟ್ಟದ ತಪ್ಪಲಲ್ಲಿ
ಗಾಂಧಿ ವಿಶಾಂತಿಗೆಂತ ತಂಗಿದ್ದಾಗ ಅಕಸ್ಮಾತ್ ಪಡೆದ
ಅನಿರೀಕ್ಷಿತ ಉತ್ತರದಿಂದಾಗಿ ಅವರಿಗೆ
ಸಾಕ್ಷಾತ್ಕಾರ ವಾದ್ದನ್ನ 
ನನ್ನ ಅಪ್ಪ ಹೇಳಿದ್ದರು 

ಒಬ್ಬ ಹುಡುಗಿ, ಚಿಕ್ಕವಳು 
ಕಂಕುಳಲ್ಲಿ ಹುಷಾರಾಗಿ ಅಕ್ಕರೇoದ
ಒಂದು ಮಗುವನ್ನು ಎತ್ತಿಕೊಂಡು
ಹುಡುಗಾಟಿಕೆಗೆ ಬರಿಗಾಲಲ್ಲಿ ಲಂಗದ ನಿರಿ ಚಿಮ್ಮುತ್ತ
ಏದುಸಿರು ಬಿಡುತ್ತ
ಗುಡ್ಡ ಹತ್ತಿ ಬರುತ್ತಿದ್ದಾಳೆ, ಬಿಸಿಲು,
ನೋಡಕ್ಕೆ ಲಕ್ಷಣವಾಗಿದ್ದಾಳೆ,
ತೇಪೆ ಹಾಕಿದ ಲಂಗ ಉಟ್ಟಿದ್ದಾಳೆ
ಬರಿಕತ್ತಿನ ಮೇಲೆ ಬಿಡದಿರೊ ಜಡೇಲಿ ಹೂ ಮುಡಿದಿದಾಳೆ.

ಮರದ ನೆರಳಲ್ಲಿ ಕೂತು ನೋಡುತ್ತಿದ್ದ
ಗಾಂಧಿಗೆ ಕನಿಕರ ಉಕ್ಕಿ ಕೆಳಗಿಳಿದು ಹೋಗಿ
ಕೇಳುತ್ತಾರೆ:
" ಭಾರವೇನಮ್ಮ? "

ಹುಡುಗಿ ನಡೀತಾನೆ
ಒಂದು ಕಂಕುಳಿಂದ ಇನ್ನೊಂದಕ್ಕೆ ಅಕ್ಕರೇoದ,
ಹುಷಾರಾಗಿ, ಗೆಲುವಾಗಿ ಮಗೂನ್ನ ಬದಲಾಯಿಸಿ
ಹೇಳುತ್ತಾಳೆ :
" ಇವನು ನನ್ನ ತಮ್ಮ ."

**ಯು ಆರ್ ಅನಂತಮೂರ್ತಿ **

Friday, October 26, 2012

ನೇಗಿಲ ಯೋಗಿ, farmer

ತಿನ್ನುವ ಪ್ರತೀ ತುತ್ತಿನಲ್ಲಿ 

ನೆನಪಾಗುವುದು ಎನಗೆ


ಮಾತೆ


ಮಡದಿ


ಮತ್ತು ನೇಗಿಲ ಯೋಗಿ

ಅಮರ ಪ್ರೇಮ

ನಮ್ಮದು ಅಮರ ಪ್ರೇಮವಾಗುತ್ತಿತ್ತು ಬೇಗಂ 

ತುಸು ಬಿಟ್ಟಿದ್ದರೆ ನಮ್ಮಿಬ್ಬರ ಅಹಂ

God, ದೇವರು

ಯಾಚಿಸಿದಾಗಲೆಲ್ಲಾ

ನೀ ಪರಿಚಿತರ ರೂಪದಲ್ಲಿ


ಅಪರಿಚಿತರ ರೂಪದಲ್ಲಿ


ನೆರವು ನೀಡುವೆ


ಕಷ್ಟ ಕಾರ್ಪಣ್ಯಗಳ 


ಕೂಪದಲ್ಲಿ ಬಿದ್ದಾಗ 


ನಿನ್ನ ನೆನೆದರೆ


ಕಾಣದ ಕೈಗಳಿಂದ 


ಹಿಡಿದು ನನ್ನ ಮೇಲೆತ್ತುವೆ 



ದೇವಾ, ಎನಗೆ ನಿನ್ನ ನೋಡುವಾಸೆ 



ಕಾಣಿಸಿಕೊಳ್ಳುವುದಿಲ್ಲ ಏಕೆ ?



ಕಣ್ಣು ಕುಕ್ಕುವಷ್ಟು ನಿನ್ನದು ವಿರಾಟ ರೂಪವೇ ?



ಅಥವಾ



ಯಾರೂ ನೋಡಲಾಗದಷ್ಟು ನೀ ಕುರೂಪಿಯೇ ?

ವಯಸು

ವ್ಯಸನವಿಲ್ಲ ವದನಕೆ ವಯಸ್ಸಾಗುತ್ತಿದೆ ಎಂದು 


ಆನಂದವಾಗಿದೆ ಆಯಸ್ಸು ಇನ್ನೂ ಗಟ್ಟಿ ಇದೆ ಎಂದು

ಮುಗುಳ್ನಗೆ

ನಿನ್ನ ಮುಗುಳ್ನಗೆಯಲ್ಲೇ

ಎನ್ನ ಮುನಿಸು ಮುಗಿಸುವೆಯಲ್ಲೇ

ಸುಲ್ತಾನ

ಯಾವುದರಲ್ಲೂ ಕಡಿಮೆಯಿಲ್ಲ ನನ್ನ ಸುಲ್ತಾನ

ಆದರೂ ಪ್ರೀತಿ ತೋರುವುದರಲ್ಲಿ ಮಾಡುತ್ತಾನೆ ಜಿಪುಣತನ ?

ಬದುಕು

ಪ್ರೀತಿಯಿಲ್ಲದ ಬದುಕು

ಹೂರಣವಿಲ್ಲದ ಕಡುಬು

ವನಸುಮ

ಮುಗುಳ್ನಗೆಯೆಂಬ ಸುವಾಸನೆ ಬೀರಿ

ನಿನ್ನ ಮನದಾಸೆ ಏನೂ ತಿಳಿಸದೇ 


ಗೊಂದಲಗಳ ಗೊಂಡಾರಣ್ಯದಲ್ಲಿ


ನನ್ನ ದೂಡಿರುವ ನೀನು 


ವನಸುಮವೇ ಸರಿ !

Wednesday, October 17, 2012

ಮೊಂಡತನ

ಕೋಲು ಊರಿದ ಅಪ್ಪನ ಮೊಂಡತನ

ನೆನಪಿಸಿತು ನನಗೆ


ನನ್ನ ಮಗನ ಹಠಮಾರಿತನ

ಸ್ವಾತಂತ್ರ್ಯ

ನಮ್ಮ ಪ್ರೇಮ ಬಂಧನದಿಂದ

ಮುಕ್ತಳಾದ ನಿನ್ನನ್ನು ನೋಡಿ


ನನಗೂ ಬೇಕು ಸ್ವಾತಂತ್ರ್ಯ ಎಂದು 


ಚೀರುತ್ತಿದೆ ನನ್ನ ಪ್ರಾಣ ಪಕ್ಷಿ

ವರ್ಣಾಲಂಕಾರ

ಕೋಪಗೊಳ್ಳಬೇಡ ನಾ ನಿನ್ನ ಕರೆಗೆ ಓಗೊಡದೆ ಇರಲು

ಭಾವನೆಗಳ ಸಾಗರದಡಿಯಲ್ಲಿದ್ದೇನೆ


ಅಕ್ಷರಗಳ ಮುತ್ತುಗಳ ಅರಸುತ್ತಿದ್ದೇನೆ 


ನಿನಗೆ ವರ್ಣಾಲಂಕಾರ ಮಾಡಲು

Thursday, August 30, 2012


ಗೆಳತಿ ನೀನೇ ನನ್ನ ಪ್ರಾಣ 


ನೀನಿಲ್ಲದೆ ಈ ಜೀವ ನಿತ್ರಾಣ


ನಿನ್ನ ಪ್ರೀತಿಯಲ್ಲಿ ಸದಾ ಈ ಜೀವನದ ಪಯಣ

Thursday, August 23, 2012

ವಾಸುದೇವ: ವಿದೇಶಿ ಕೈಲಿ ನಮ್ಮ ಅಡುಗೆ..

ವಾಸುದೇವ: ವಿದೇಶಿ ಕೈಲಿ ನಮ್ಮ ಅಡುಗೆ..: ಚಿತ್ರ  ಕೃಪೆ : ಮೋಹನ್  ವೆರ್ನೆಕರ್  Formerly Recording Officer in Karnataka Legislative Assembly Secretariat. Iam a writer and 48 books in...

Tuesday, August 21, 2012

Friday, April 13, 2012

Túy Sơn Viên: Update photos of plants in TSV

Túy Sơn Viên: Update photos of plants in TSV: Weekend vừa rồi mình vù lên TSV hai bữa để thăm đám cây. Thương chúng nó ghê, dù bị bỏ bê chúng vẫn âm thầm trổ bông một phần chắc do mùa nà...

Friday, March 16, 2012

Don't believe the lie: Organic farming CAN feed the world

But the truth of the matter is that organic farming by itself is fully capable of feeding the world -- we just need to make a few changes to the way we grow and raise our food, which includes putting an end to the factory farming methods that are destroying our health and the planet.


Learn more:http://www.naturalnews.com/035150_organic_farming_feed_the_world_soil.html#ixzz1pHUW6bxD

Don't believe the lie: Organic farming CAN feed the world

Monday, January 23, 2012

ಅಜ್ಜಿ

ಅಜ್ಜಿ ನೀನೆಷ್ಟು ಒಳ್ಳೆಯವಳು, ನೀನೆಷ್ಟು ಆಪ್ತಳು

ನಾನು ಅಜ್ಜನ್ನಾದರೂ ನಿನ್ನ ಮೊಮ್ಮಗನ್ನಾಗಿ

ನಿನ್ನ ತೊಡೆಯ ಮೇಲೆ ತಲೆ ಇಟ್ಟು ಮಲಗುವಾಸೆ

ದೇವರು ನಿನಗೆ ಆಯುಷ್ಯ ಇನ್ನಷ್ಟು ಹೆಚ್ಚಿಸಲಿ ಇನ್ನಷ್ಟು ಹೆಚ್ಚಿಸಲಿ