Tuesday, January 27, 2015

ಸಾ..ವು

ಸಾವು ನನ್ನೆದುರು ಬಂದು ಹಲ್ಕಿರಿಯಿತು
ಅದು ಹೆಣ್ಣೋ ಗಂಡೋ ತಿಳಿಯದಾಯಿತು
ನನ್ನ ಬೆನ್ನ ತಬ್ಬಿದಾಗ ಚುಚ್ಚಿದ್ದು
ಕುಚಾಗ್ರಗಳೋ, ನಖಗಳೋ ಅರಿಯದಾಯಿತು,
ಕಣ್ಣುಗಳು ಹಸಿರು ಕೆಂಪು ಮಿಶ್ರಿತವಾಗಿದ್ದವು
ನನ್ನ ತೊಡೆಗಳನ್ನು ತನ್ನ ತೊಡೆಗಳಂತೆ ಕಾಣುವ
ಬಾಹುಗಳಿಂದ ಬಂದಿಸಲೆತ್ನಿಸಿತು
ಮಾರುದ್ದದ ನಾಲಿಗೆಯಿಂದ ನನ್ನ ನೆಕ್ಕತೊಡಗಿತು
ಬಳಸಲನುವಾಯಿತು,
ನಾ ಲೋಳೆ ಲೋಳೆಯಂತೆ ಜಾರುತ್ತಿದ್ದೆನು
ಕಡೆಗೆ “ಥೂ, ಅಯೋಗ್ಯ , ಸಾಯಲು
ಕೂಡ ಯೋಗ್ಯತೆಯಿಲ್ಲ” ಎಂದು
ನಿರಾಶೆಯಿಂದ ಮಾಯವಾಯಿತು
ಅರಿವು ಬರಲು
“ವಾಹ್ ನೀನು ಮೃತ್ಯುಂಜಯ” ಎಂದರು ಕೆಲವರು
“ಪಾಪಿ ಚಿರಾಯು” ಎಂದುಕೊಂಡರು ಕೆಲವರು

1 comment:

Badarinath Palavalli said...

ಕವಿತೆ ತುಂಬ ಇಷ್ಟವಾಯಿತು.ಕಲ್ಪನೆ ಘೋರವಾಗಿದೆ. ರೋಚಕವಾಗಿದೆ.
ಆದರೆ, ತಾವು ಸಾವಿನ ಕುರಿತಾಗಿ ಕವನಗಳು ಬರೆಯಬೇಡಿರಿ.
ನಮಗೆ ಬೇಸರವಾಗುತ್ತದೆ! :-(