Tuesday, November 13, 2012

1


ನಾ ಕಾದೆ ಕಾದೆ 
ನಿನ್ನ ಪ್ರೀತಿ 
ಅರಿವಾಗುವಷ್ಟರಲ್ಲಿ 
ನಾ  ಅರಳುಮರುಳಾದೆ 

Wednesday, November 7, 2012

ಮನ

ಮರಗಟ್ಟಿಹುದು ಮನವು

ಮನದನ್ನೆಯ


ನೆನೆ ನೆನೆದು

ಹಾಸ್ಯ 1

ಮಟ ಮಟ ಮದ್ಯಾಹ್ನ ಅವ್ನು ಹಾಯಾಗ್ ಹೊಂಗೆ ಮರದ್ ಕೆಳಗೆ ಬಿದ್ಕೊಂಡಿದ್ದ, 
ಅಂಗೆ ಕಣ್ ಭಾರ ಆಯ್ತು , ನಿದ್ದೆ ಬಂತು , ಕನಸ್ ಬೀಳೊಕ್ ಶುರು ಆಯ್ತು. 

ನೋಡ್ ನೋಡುತ್ಲೇ ಅವನ್ ಮುಂದೆ ಮೇನಕೆ ಬಂದು ನಿಂತಂಗಾಯ್ತು , ಆಮೇಲೆ ಪಕ್ಕದಲ್ಲಿ ಮಲಗ್ದಂಗಾಯ್ತು . 

ಇವ್ನು ಅವಳನ ಮ್ಯಾಕಿಂದ ಕೇಳೀಕೊರ್ಗು ನೋಡ್ದಾ , ಶ್ಯಾನೆ ಚೆನ್ದಾಗಿದ್ಲು , ಮುಖ ಹತ್ರ ತಂದ್ಲು, 

ಯಾವ್ ಕಂಪನಿ ಲಿಪ್ ಸ್ಟಿಕ್ ಹಾಕಿದ್ಲೋ , ತುಟಿ ಸ್ಯಾನೆ ಸೆಂದಾಕ್ ಇತ್ತು , 

ಇವ್ನು ಬಾಯ್ ಬಿಡೋಕ್ ಮುಂಚೆ , ಅವ್ಳು ಇವ್ನಿಗೆ ಮುತ್ತು ಕೊಡೋಕ್ ಶುರು ಮಾಡುದ್ಲು , 


ಇವ್ನು ಚಡಪಡಾಯ್ಸ್ ಬುಟ್ಟ , ಇವನ್ ತುಟಿ ತೇವ ಆಗೋಯ್ತು, ಮೂಗೂನು ತೇವ ಆಗೋಕೆ ಶುರು ಆಯ್ತು , 


............
ಟಕ್ ಅಂತ ಕಣ್ ಬಿಟ್ಟ ... ...ಮ್ಯಾಕೆ ಅವನ್ ಮೂತಿ ನೆಕ್ ತಾ ಇತ್ತು

Archibald MacLeish, Poet,ಆರ್ಚಿಬಾಲ್ದ್ ಮ್ಯಾಕ್ ಲೀಶ್ ಎನ್ನುವಂತೆ ಕವಿತೆ

ಆರ್ಚಿಬಾಲ್ದ್ ಮ್ಯಾಕ್ ಲೀಶ್ ಎನ್ನುವಂತೆ ಕವಿತೆ 

=======================

ಪದ್ಯ ಪದವಿಲ್ಲದಿರಬೇಕು


ಹೆಜ್ಜೆಗುರುತು ಇಲ್ಲದೆ ಪಕ್ಷಿ ಹಾರುವಂತೆ 

ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು 


ಏರುವ ಚಂದ್ರನಂತೆ 


ಹೇಳಕೂಡದು 


ಇರಬೇಕು 




**ಯು ಆರ್ ಅನಂತಮೂರ್ತಿ **

ಪ್ರೀತಿ ಮತ್ತು ಕರ್ತವ್ಯ

ಪ್ರೀತಿ ಮತ್ತು ಕರ್ತವ್ಯ 
============

ಒಂದು ಬೆಟ್ಟದ ತಪ್ಪಲಲ್ಲಿ
ಗಾಂಧಿ ವಿಶಾಂತಿಗೆಂತ ತಂಗಿದ್ದಾಗ ಅಕಸ್ಮಾತ್ ಪಡೆದ
ಅನಿರೀಕ್ಷಿತ ಉತ್ತರದಿಂದಾಗಿ ಅವರಿಗೆ
ಸಾಕ್ಷಾತ್ಕಾರ ವಾದ್ದನ್ನ 
ನನ್ನ ಅಪ್ಪ ಹೇಳಿದ್ದರು 

ಒಬ್ಬ ಹುಡುಗಿ, ಚಿಕ್ಕವಳು 
ಕಂಕುಳಲ್ಲಿ ಹುಷಾರಾಗಿ ಅಕ್ಕರೇoದ
ಒಂದು ಮಗುವನ್ನು ಎತ್ತಿಕೊಂಡು
ಹುಡುಗಾಟಿಕೆಗೆ ಬರಿಗಾಲಲ್ಲಿ ಲಂಗದ ನಿರಿ ಚಿಮ್ಮುತ್ತ
ಏದುಸಿರು ಬಿಡುತ್ತ
ಗುಡ್ಡ ಹತ್ತಿ ಬರುತ್ತಿದ್ದಾಳೆ, ಬಿಸಿಲು,
ನೋಡಕ್ಕೆ ಲಕ್ಷಣವಾಗಿದ್ದಾಳೆ,
ತೇಪೆ ಹಾಕಿದ ಲಂಗ ಉಟ್ಟಿದ್ದಾಳೆ
ಬರಿಕತ್ತಿನ ಮೇಲೆ ಬಿಡದಿರೊ ಜಡೇಲಿ ಹೂ ಮುಡಿದಿದಾಳೆ.

ಮರದ ನೆರಳಲ್ಲಿ ಕೂತು ನೋಡುತ್ತಿದ್ದ
ಗಾಂಧಿಗೆ ಕನಿಕರ ಉಕ್ಕಿ ಕೆಳಗಿಳಿದು ಹೋಗಿ
ಕೇಳುತ್ತಾರೆ:
" ಭಾರವೇನಮ್ಮ? "

ಹುಡುಗಿ ನಡೀತಾನೆ
ಒಂದು ಕಂಕುಳಿಂದ ಇನ್ನೊಂದಕ್ಕೆ ಅಕ್ಕರೇoದ,
ಹುಷಾರಾಗಿ, ಗೆಲುವಾಗಿ ಮಗೂನ್ನ ಬದಲಾಯಿಸಿ
ಹೇಳುತ್ತಾಳೆ :
" ಇವನು ನನ್ನ ತಮ್ಮ ."

**ಯು ಆರ್ ಅನಂತಮೂರ್ತಿ **