Friday, October 26, 2012

ನೇಗಿಲ ಯೋಗಿ, farmer

ತಿನ್ನುವ ಪ್ರತೀ ತುತ್ತಿನಲ್ಲಿ 

ನೆನಪಾಗುವುದು ಎನಗೆ


ಮಾತೆ


ಮಡದಿ


ಮತ್ತು ನೇಗಿಲ ಯೋಗಿ

ಅಮರ ಪ್ರೇಮ

ನಮ್ಮದು ಅಮರ ಪ್ರೇಮವಾಗುತ್ತಿತ್ತು ಬೇಗಂ 

ತುಸು ಬಿಟ್ಟಿದ್ದರೆ ನಮ್ಮಿಬ್ಬರ ಅಹಂ

God, ದೇವರು

ಯಾಚಿಸಿದಾಗಲೆಲ್ಲಾ

ನೀ ಪರಿಚಿತರ ರೂಪದಲ್ಲಿ


ಅಪರಿಚಿತರ ರೂಪದಲ್ಲಿ


ನೆರವು ನೀಡುವೆ


ಕಷ್ಟ ಕಾರ್ಪಣ್ಯಗಳ 


ಕೂಪದಲ್ಲಿ ಬಿದ್ದಾಗ 


ನಿನ್ನ ನೆನೆದರೆ


ಕಾಣದ ಕೈಗಳಿಂದ 


ಹಿಡಿದು ನನ್ನ ಮೇಲೆತ್ತುವೆ 



ದೇವಾ, ಎನಗೆ ನಿನ್ನ ನೋಡುವಾಸೆ 



ಕಾಣಿಸಿಕೊಳ್ಳುವುದಿಲ್ಲ ಏಕೆ ?



ಕಣ್ಣು ಕುಕ್ಕುವಷ್ಟು ನಿನ್ನದು ವಿರಾಟ ರೂಪವೇ ?



ಅಥವಾ



ಯಾರೂ ನೋಡಲಾಗದಷ್ಟು ನೀ ಕುರೂಪಿಯೇ ?

ವಯಸು

ವ್ಯಸನವಿಲ್ಲ ವದನಕೆ ವಯಸ್ಸಾಗುತ್ತಿದೆ ಎಂದು 


ಆನಂದವಾಗಿದೆ ಆಯಸ್ಸು ಇನ್ನೂ ಗಟ್ಟಿ ಇದೆ ಎಂದು

ಮುಗುಳ್ನಗೆ

ನಿನ್ನ ಮುಗುಳ್ನಗೆಯಲ್ಲೇ

ಎನ್ನ ಮುನಿಸು ಮುಗಿಸುವೆಯಲ್ಲೇ

ಸುಲ್ತಾನ

ಯಾವುದರಲ್ಲೂ ಕಡಿಮೆಯಿಲ್ಲ ನನ್ನ ಸುಲ್ತಾನ

ಆದರೂ ಪ್ರೀತಿ ತೋರುವುದರಲ್ಲಿ ಮಾಡುತ್ತಾನೆ ಜಿಪುಣತನ ?

ಬದುಕು

ಪ್ರೀತಿಯಿಲ್ಲದ ಬದುಕು

ಹೂರಣವಿಲ್ಲದ ಕಡುಬು

ವನಸುಮ

ಮುಗುಳ್ನಗೆಯೆಂಬ ಸುವಾಸನೆ ಬೀರಿ

ನಿನ್ನ ಮನದಾಸೆ ಏನೂ ತಿಳಿಸದೇ 


ಗೊಂದಲಗಳ ಗೊಂಡಾರಣ್ಯದಲ್ಲಿ


ನನ್ನ ದೂಡಿರುವ ನೀನು 


ವನಸುಮವೇ ಸರಿ !

Wednesday, October 17, 2012

ಮೊಂಡತನ

ಕೋಲು ಊರಿದ ಅಪ್ಪನ ಮೊಂಡತನ

ನೆನಪಿಸಿತು ನನಗೆ


ನನ್ನ ಮಗನ ಹಠಮಾರಿತನ

ಸ್ವಾತಂತ್ರ್ಯ

ನಮ್ಮ ಪ್ರೇಮ ಬಂಧನದಿಂದ

ಮುಕ್ತಳಾದ ನಿನ್ನನ್ನು ನೋಡಿ


ನನಗೂ ಬೇಕು ಸ್ವಾತಂತ್ರ್ಯ ಎಂದು 


ಚೀರುತ್ತಿದೆ ನನ್ನ ಪ್ರಾಣ ಪಕ್ಷಿ

ವರ್ಣಾಲಂಕಾರ

ಕೋಪಗೊಳ್ಳಬೇಡ ನಾ ನಿನ್ನ ಕರೆಗೆ ಓಗೊಡದೆ ಇರಲು

ಭಾವನೆಗಳ ಸಾಗರದಡಿಯಲ್ಲಿದ್ದೇನೆ


ಅಕ್ಷರಗಳ ಮುತ್ತುಗಳ ಅರಸುತ್ತಿದ್ದೇನೆ 


ನಿನಗೆ ವರ್ಣಾಲಂಕಾರ ಮಾಡಲು