
“ಕೊಂಬೆಯ ಮೇಲೆ
ಮಳೆಯಲ್ಲಿ ನೆನೆಯುತ್ತಮುದುಡಿ ಕೂತಿದೆ ಹಕ್ಕಿಯೊಂದುಅನಿಸಿತು ನನಗೆನನ್ನ ಕಷ್ಟ ಏನೇನೂ ಅಲ್ಲ ಎಂದು”ಇದು ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ʼಚುಕ್ಕಿʼ ಕವನ ಸಂಕಲನದ ಉತ್ತಮ ಪದ್ಯಗಳಲ್ಲಿ ಒಂದು.===ಮಾಯಗಾರ ನೀನೆಂದುಗೊತ್ತಿರಲಿಲ್ಲನೀನು ಬಂದ ಮೇಲೆಕಣ್ಣು ನಿಶ್ಚಲ ಕೊಳವಾಗಿದೆಹೃದಯ ಮೆಲುಕು ಹಾಕಲುಕಲಿತಿದೆ==='ಇದ್ದರೆ ಇರಬೇಕುಸೂರ್ಯ ಚಂದ್ರರಂತೆಜಗದ ಮಾತಿಗೆ ಕಿವಿಗೊಡದೆಮೌನವಾಗಿ ಬೆಳಕ ಚೆಲ್ಲುತ್ತಾ 'ಎನ್ನುವ ಚೆನ್ನುಡಿಯನ್ನೂ ಒಳಗೊಂಡಿದೆಬಿದ್ದಿರುವ ವಸ್ತುಗಳಜೋಡಿಸುವಮನಸಿಲ್ಲ ಇಂದು ನನಗೆಜೋಡಿಸಲು ಕಾದಿರುವೆಮಾತಿಗೆ ಮಾತು ನಿನ್ನ ಜೊತೆಗೆಸರಳವಾದ ಮೂರು ನಾಲ್ಕು ಸಾಲುಗಳ 84 ಹನಿಗವನಗಳಲ್ಲಿ ಭಾವೋತ್ಕರ್ಷ, ಮನದಿಂಗಿತ, ತತ್ವ ಎಲ್ಲವೂ ಅಡಗಿವೆ. ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುವುದು ಮತ್ತು ತನ್ನ ಪ್ರಿಯರಾದವರೊಡನೆ ಹೇಳುವ ಮಾತುಗಳು ಇಲ್ಲಿ ಕವನಗಳ ರೂಪ ಪಡೆದುಕೊಂಡಿವೆ.ʼಚುಕ್ಕಿʼ ಪುಸ್ತಕ ಚೆನ್ನಾಗಿದೆ
“ದಾರವಷ್ಟೆ ಕಾಣುವ ಈ ಹೂ ಮಾಲೆ
ದೇವರಿಗೆ ಜನಿವಾರವೇನೇ?”
ಮಡದಿ ದಬಾಯಿಸುವುದರಲ್ಲಿ ಜಾಣೆ"ತೆನೆ"ಕವಿ, ಕಥೆಗಾರ ಮತ್ತು ಸಾಹಿತ್ಯಾಸಕ್ತರಾದ ಶ್ರೀ ಅನಂತ ರಮೇಶ್ ಅವರ ʼಹನಿಗವನ-ಕಿರುಗವನ ಬಣವೆʼ ಎನ್ನುವ ಟ್ಯಾಗ್ ಲೈನ್ ಹೊಂದಿರುವ ಕವನ ಸಂಕಲನ ʼತೆನೆʼ. ಇದರಲ್ಲಿ ನೂರಾ ತೊಂಬತ್ತೊಂದಕ್ಕೂ ಹೆಚ್ಚು ಹನಿಗವನ ಮತ್ತು ಕಿರುಗವನಗಳಿವೆ.ಪ್ರೇಮ, ರಾಜಕೀಯ, ನಿತ್ಯ ಬದುಕಿನ ಆಗುಹೋಗುಗಳನ್ನು, ಸಮಾಜದ ಓರೆಕೋರೆಗಳನ್ನು ತಮ್ಮ ʼಪನ್ʼ ದೃಷ್ಟಿಯಿಂದ ವೀಕ್ಷಿಸಿ ಹನಿಗವನದ ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಗಾಂಧಿ, ಕಲಾಂ, ವಾಜಪೇಯಿ, ಅಡಿಗರು, ನಾರಾಯಣಮೂರ್ತಿ, ವಿಶ್ವೇಶ್ವರಯ್ಯನವರ ಬಗ್ಗೆ ವಿರಚಿತ ಕಿರುಗವನಗಳು ಅನಂತ ಸರ್ ಶೈಲಿಯಲ್ಲಿ ಸೊಗಸಾಗಿವೆ.ಮೊದಲು ಬಿಡದಿಯಲ್ಲಿದ್ದು ಈಗ ತಮ್ಮದೇ ದೇಶದಲ್ಲಿರುವ ಸ್ವಾಮಿಯ ಬಗ್ಗೆ ಬರೆದಿರುವ ʼಚೆಲ್ಲುʼ ಎನ್ನುವ ಹನಿಗವನವು ಕವಿಯು ಹೇಗೆ ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಾರೆಂಬುದಕ್ಕೆ ಸಾಕ್ಷಿಯಾಗಿದೆ:ಬಿಡದಿ ಬುಡದಿ ಪ್ರಬುದ್ಧಬಡಬಡಿಕೆಯೂ ಶುದ್ಧ!ನಿತ್ಯ ಹಾಸ್ಯ ರಸಾಯನಬಿಡಸುತ್ತಲೆ ಚೆಲ್ಲು ಜೀವನ!ತಮ್ಮನ್ನು ಬಿಕರಿಗಿಟ್ಟುಕೊಂಡ ಸ್ವಯಂ ಗುರುಗಳ ಬಗ್ಗೆ ಬರೆದ ಕವನ ʼಆಶೀರ್ವಾದ ಮೊತ್ತʼ -ಆ ದೊಡ್ಡ ಸ್ವಾಮೀಜಿಗಳಆಶೀರ್ವಾದ ಪಡೆದಿದ್ದೇನೆನಂಬಿಕೆಯಾಗದಿದ್ದರೆತೋರಿಸುತ್ತೇನೆ ನಿಮಗೆಹತ್ತು ಸಾವಿರ ರೂಪಾಯಿರಸೀತಿ ಪಾವತಿಸಿದ್ದಕ್ಕೆ !?ಸಂಸಾರಸ್ಥನಾಗಿ ಬಡ್ತಿ ಹೊಂದಿದವನ ಸಾಲುಗಳು “ಮೊದಲು – ನಂತರ” ಕವನದಲ್ಲಿ ಹೀಗಿದೆ -ಮೊದಲ ಭೇಟಿಗಳಲ್ಲಿನೀನು ಉಸುರಿದ ಆಸೆಗಳುಹೃದಯ ಸೇರಿ ಭದ್ರವಾದವುನಿನ್ನ ಈಗಿನ ಆಸೆಗಳುಹೃದಯ ಹತ್ತಿರದ ಕಿಸೆಗೂನುಸುಳಿ ಖರ್ಚಿನ ರೂಪವಾದವುನನಗಿಷ್ಟವಾದ ಒಂದು ಹೃದಯಸ್ಪರ್ಶಿ ಹನಿಗವನ -ಬೇಸಿಗೆಯ ಬಿರು ಬಿಸಿಲಿಗೆ“ಬಾಡಿದ” ಹೂಗಳ ಯಾರೋಚರ್ಚಿಸದೆ ಚೌಕಾಶಿಸದೆ ಕೊಂಡರುಮಾರುವವಳು “ಅರಳಿದಳು”ಹೀಗೆ ಹಲವಾರು ಕವನಗಳು ಮನಸ್ಸಿಗೆ ತಾಗುತ್ತವೆ.
ಓದುಗರಿಗೆ ಅನುಕೂಲವಾಗಲೆಂದೇ ಸಂಕಲನದಲ್ಲಿ ಕವನಗಳನ್ನು ಕವನ-ಹನಿಗವನ, ತುಂತುರು, ಮಾಯೆ, ವಸಂತನ ಹಕ್ಕಿಗಳು, ಹೂ ಹಾಡು, ಆಗು ಹೋಗು, ಗಟ್ಟಿ ಕಾಲು ಮತ್ತು ಕಿರು ವಿಚಾರ ಎಂದು ಎಂಟು ಅಧ್ಯಯಗಳನ್ನಾಗಿ ವರ್ಗೀಕರಿಸಿದ್ದಾರೆ.ಇದು ಕನ್ನಡ ಕವನಸಂಕಲನಗಳ ಸಂಕುಲಕ್ಕೆ ಮತ್ತೊಂದು ಉತ್ತಮ ಸೇರ್ಪಡೆಯಾಗಿದೆ.