Wednesday, November 26, 2025

“ಅವಳ ಕಾಲು ಸೋಲದಿರಲಿ” ಕವನ ಸಂಕಲನ - ಫಾತಿಮಾ ರಲಿಯಾ. Avala Kalu Soladirali - Poetry collection by Fathima Raliya Hejamady





 ಗಾಯದ ಮೇಲೆ ಕೈ ಇಟ್ಟರೆ

ಕವಿತೆ ರಚ್ಚೆ ಹಿಡಿಯುತ್ತಿತ್ತು
ಎತ್ತಿಕೋ ಎಂದು
ಥೇಟು ಮಗಳಂತೆ!

ʻರೊಟ್ಟಿಯಂಥಾ ಕವಿತೆʼಯ ಸಾಲುಗಳಿವು

ಮೂವತ್ತು ಕವನಗಳಿರುವ “ಅವಳ ಕಾಲು ಸೋಲದಿರಲಿ” ಕವನ ಸಂಕಲನವನ್ನು ಫಾತಿಮಾ ರಲಿಯಾ ತಮ್ಮದೇ ಪ್ರಕಾಶನ ಉಡುಗೊರೆ ಪ್ರಕಾಶನದ ಮೂಲಕ ಹೊರತಂದ್ದಿದ್ದಾರೆ.


ಬುದ್ಧನನ್ನರಸುತ್ತಾ ಕವಿತೆಯಲ್ಲಿ ಬರುವ
ʻʻನನಗೆ ಜ್ಞಾನದ ಹಂಬಲವಿಲ್ಲ
ಬುದ್ಧನೇ ಅಂದಿದ್ದಾನಲ್ಲಾ
ಅತಿ ಆಸೆ ಸಲ್ಲದೆಂದು”

“ಆವನ ದಕ್ಕಿಸಿಕೊಳ್ಳಬೇಕೆಂದಿದ್ದರೆ
ನಡಿಗೆ ನವಿಲಾಗಬೇಕು
ಅರ್ಥ ಅರಸುತ್ತಾ
ಅವನೊಳಂದಾಗಬೇಕು”

ʻಕಣ್ಣತೇವʼಕ್ಕೆಲ್ಲಾ ಅರ್ಥ ಹುಡುಕಬಾರದು

ಶಕುಂತಲೆ ಕವನದಲ್ಲಿ ಶಕುಂತಲೆಯನ್ನು ವಿಭಿನ್ನ ದೃಷ್ಟಿಕೋನದಿಂದ ಪ್ರಶ್ನಿಸಲಾಗಿದೆ

ಅಹಲ್ಯೆಯನ್ನು ಉದ್ದೇಶಿಸಿ ರಚಿಸಿದ ಕವನದಲ್ಲಿ
“ನಿನ್ನೆದೆಯ ಕಲ್ಲು ಮಾಡಿಕೊಂಡ
ವಿದ್ಯೆಯ ನನಗೂ ದಯಪಾಲಿಸು
ಒಂದಿಷ್ಟು ದಿನ ಬದುಕಬೇಕಿದೆ
ನನ್ನೆದೆಯ ಆಕ್ರೋಶ ನಿರಾಶೆಗಳನ್ನೆಲ್ಲಾ
ಮರೆತಂತೆ ನಟಿಸಿ “


“ಮಗುವಿಗೆ ತಾನು ಮಗುವೆಂದಾದರೂ ತಿಳಿದಿರಬಹುದೇ? ಎಂದು ಪ್ರಶ್ನಿಸಿ ಮುಗಿಸಿರುವ ಅನಿಕೇತನವೇ? ಎನ್ನುವ ಕವನವು ಕವಯತ್ರಿಯವರ ಯೋಚನಾಲಹರಿಯನ್ನು ಶ್ಲಾಘಿಸುವಂತೆ ಮಾಡುತ್ತದೆ.

ʻಬರೆಯದೇ ಉಳಿದ ಪದ್ಯʼ ದ
ಜೋರು ಮಳೆಗೆ ಸ್ವಚ್ಛವಾದ
ಸರಕಾರಿ ಶಾಲೆಯ ತಗಡು ಬೋರ್ಡಿನಷ್ಟೇ ಸತ್ಯ ಮೊದಲ ಪದ್ಯ

ʼಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆʼ
ಉದ್ಘಾರ ಅಚ್ಚರಿಯೋ ಕುಹಕವೋ
ಮೆಚ್ಚುಗೆಯೋ ವ್ಯಂಗ್ಯವೋ
ಅರ್ಥವಾಗದಷ್ಟು ಬೋಳೇತನ
ಮೊದಲ ಪದ್ಯಕ್ಕಿತ್ತು
ಹಾಗೆಂದೇ ಅದು ಬರೆಯದೇ ಉಳಿದದ್ದು.

ಎನ್ನುವ ಸಾಲುಗಳು ಗಮನ ಸೆಳೆಯುತ್ತವೆ.


ಹೂ ಮಾರುವ ಹುಡುಗಿ, ಬುದ್ಧ ನಗುತ್ತಿಲ್ಲ, ಸಮಚಿತ್ತೆ ಊರ್ಮಿಳೆ, ಶಚೀತೀರ್ಥದ ಉಂಗುರದ ನೆರಳು, ಹೆಣ್ಣೇ ಸಾಕು ಈ ಮುಲಾಜು,
ಪುಟಾಣಿ ಹೆಜ್ಜೆ ಕಳೆದುಹೋದದ್ದೆಲ್ಲಿ? ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು, ಎಲ್ಲ ಮುಗಿದ ಮೇಲೆ, ರೊಟ್ಟಿಯಂಥಾ ಕವಿತೆ ….ನನಗಿಷ್ಟವಾದ ಕೆಲವು ಕವನಗಳು.

ಎದೆಯ ಸಂಕಟ ಬೆನ್ನೇರುತ್ತವೆ ಕವನದಲ್ಲಿ ಎಲ್ಲಾ ವಯಸ್ಸಿನ ಹೆಣ್ಣು ಜೀವಗಳ ನೋವ ಪ್ರಸ್ತುತಪಡಿಸುತ್ತಾ “ಬಹುಶಃ ಕೃಷ್ಣನಿಗೂ ಈಗೀಗ ಸಂಜ್ಞೆಗಳು ಅರ್ಥಾಗುವುದಿಲ್ಲವೇನೋ?” ಎಂದು ಕೇಳುತ್ತಾರೆ.

ʻʻಎಲೆ ಕಳಚುವ ಹೊತ್ತು” ಕವನದಲ್ಲಿ ಎದ್ದು ಕಾಣುವ “ದೇವರೇ ಅವಳ ಕಾಲು ಸೋಲದಿರಲಿ” ಎನ್ನುವ ವಾಕ್ಯ ಹೃದಯ ತಟ್ಟುತ್ತದೆ

ಫಾತಿಮಾ ಅವರ ಸಾಹಿತ್ಯ ಕೃಷಿ ನಿಲ್ಲದಿರಲಿ, ಸಾಗುತ್ತಲೇ ಇರಲಿ. ಶುಭವಾಗಲಿ

ಪುಸ್ತಕ್ಕಕ್ಕಾಗಿ ಧನ್ಯವಾದಗಳು ಕವಿಮಿತ್ರ ಯಂಶ ಬೇಂಗಿಲ.


Book ʼಚುಕ್ಕಿʼ ಕವನ ಸಂಕಲನ Chukki - Poetry Collection by Vijayalakshmi Satyamurthy

 


“ಕೊಂಬೆಯ ಮೇಲೆ

ಮಳೆಯಲ್ಲಿ ನೆನೆಯುತ್ತ
ಮುದುಡಿ ಕೂತಿದೆ ಹಕ್ಕಿಯೊಂದು
ಅನಿಸಿತು ನನಗೆ
ನನ್ನ ಕಷ್ಟ ಏನೇನೂ ಅಲ್ಲ ಎಂದು”

ಇದು ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ʼಚುಕ್ಕಿʼ ಕವನ ಸಂಕಲನದ ಉತ್ತಮ ಪದ್ಯಗಳಲ್ಲಿ ಒಂದು.

===
ಮಾಯಗಾರ ನೀನೆಂದು
ಗೊತ್ತಿರಲಿಲ್ಲ
ನೀನು ಬಂದ ಮೇಲೆ

ಕಣ್ಣು ನಿಶ್ಚಲ ಕೊಳವಾಗಿದೆ
ಹೃದಯ ಮೆಲುಕು ಹಾಕಲು
ಕಲಿತಿದೆ
===

'ಇದ್ದರೆ ಇರಬೇಕು
ಸೂರ್ಯ ಚಂದ್ರರಂತೆ

ಜಗದ ಮಾತಿಗೆ ಕಿವಿಗೊಡದೆ
ಮೌನವಾಗಿ ಬೆಳಕ ಚೆಲ್ಲುತ್ತಾ '

ಎನ್ನುವ ಚೆನ್ನುಡಿಯನ್ನೂ ಒಳಗೊಂಡಿದೆ

ಬಿದ್ದಿರುವ ವಸ್ತುಗಳ
ಜೋಡಿಸುವ
ಮನಸಿಲ್ಲ ಇಂದು ನನಗೆ

ಜೋಡಿಸಲು ಕಾದಿರುವೆ
ಮಾತಿಗೆ ಮಾತು ನಿನ್ನ ಜೊತೆಗೆ


ಸರಳವಾದ ಮೂರು ನಾಲ್ಕು ಸಾಲುಗಳ 84 ಹನಿಗವನಗಳಲ್ಲಿ ಭಾವೋತ್ಕರ್ಷ, ಮನದಿಂಗಿತ, ತತ್ವ ಎಲ್ಲವೂ ಅಡಗಿವೆ. ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುವುದು ಮತ್ತು ತನ್ನ ಪ್ರಿಯರಾದವರೊಡನೆ ಹೇಳುವ ಮಾತುಗಳು ಇಲ್ಲಿ ಕವನಗಳ ರೂಪ ಪಡೆದುಕೊಂಡಿವೆ.


ʼಚುಕ್ಕಿʼ ಪುಸ್ತಕ ಚೆನ್ನಾಗಿದೆ

Book - "ತೆನೆ" ಕವನ ಸಂಕಲನ - ಶ್ರೀ ಅನಂತ ರಮೇಶ್. Tene Poetry collection by Anantha Ramesh

 




“ದಾರವಷ್ಟೆ ಕಾಣುವ 
ಈ ಹೂ ಮಾಲೆ 
ದೇವರಿಗೆ ಜನಿವಾರವೇನೇ?”
ಮಡದಿ ದಬಾಯಿಸುವುದರಲ್ಲಿ ಜಾಣೆ

"ತೆನೆ"

ಕವಿ, ಕಥೆಗಾರ ಮತ್ತು ಸಾಹಿತ್ಯಾಸಕ್ತರಾದ ಶ್ರೀ ಅನಂತ ರಮೇಶ್ ಅವರ ʼಹನಿಗವನ-ಕಿರುಗವನ ಬಣವೆʼ ಎನ್ನುವ ಟ್ಯಾಗ್ ಲೈನ್ ಹೊಂದಿರುವ ಕವನ ಸಂಕಲನ ʼತೆನೆʼ. ಇದರಲ್ಲಿ ನೂರಾ ತೊಂಬತ್ತೊಂದಕ್ಕೂ ಹೆಚ್ಚು ಹನಿಗವನ ಮತ್ತು ಕಿರುಗವನಗಳಿವೆ.

ಪ್ರೇಮ, ರಾಜಕೀಯ, ನಿತ್ಯ ಬದುಕಿನ ಆಗುಹೋಗುಗಳನ್ನು, ಸಮಾಜದ ಓರೆಕೋರೆಗಳನ್ನು ತಮ್ಮ ʼಪನ್ʼ ದೃಷ್ಟಿಯಿಂದ ವೀಕ್ಷಿಸಿ ಹನಿಗವನದ ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಗಾಂಧಿ, ಕಲಾಂ, ವಾಜಪೇಯಿ, ಅಡಿಗರು, ನಾರಾಯಣಮೂರ್ತಿ, ವಿಶ್ವೇಶ್ವರಯ್ಯನವರ ಬಗ್ಗೆ ವಿರಚಿತ ಕಿರುಗವನಗಳು ಅನಂತ ಸರ್ ಶೈಲಿಯಲ್ಲಿ ಸೊಗಸಾಗಿವೆ.

ಮೊದಲು ಬಿಡದಿಯಲ್ಲಿದ್ದು ಈಗ ತಮ್ಮದೇ ದೇಶದಲ್ಲಿರುವ ಸ್ವಾಮಿಯ ಬಗ್ಗೆ ಬರೆದಿರುವ ʼಚೆಲ್ಲುʼ ಎನ್ನುವ ಹನಿಗವನವು ಕವಿಯು ಹೇಗೆ ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಾರೆಂಬುದಕ್ಕೆ ಸಾಕ್ಷಿಯಾಗಿದೆ:

ಬಿಡದಿ ಬುಡದಿ ಪ್ರಬುದ್ಧ
ಬಡಬಡಿಕೆಯೂ ಶುದ್ಧ!
ನಿತ್ಯ ಹಾಸ್ಯ ರಸಾಯನ
ಬಿಡಸುತ್ತಲೆ ಚೆಲ್ಲು ಜೀವನ!

ತಮ್ಮನ್ನು ಬಿಕರಿಗಿಟ್ಟುಕೊಂಡ ಸ್ವಯಂ ಗುರುಗಳ ಬಗ್ಗೆ ಬರೆದ ಕವನ ʼಆಶೀರ್ವಾದ ಮೊತ್ತʼ -

ಆ ದೊಡ್ಡ ಸ್ವಾಮೀಜಿಗಳ
ಆಶೀರ್ವಾದ ಪಡೆದಿದ್ದೇನೆ
ನಂಬಿಕೆಯಾಗದಿದ್ದರೆ
ತೋರಿಸುತ್ತೇನೆ ನಿಮಗೆ
ಹತ್ತು ಸಾವಿರ ರೂಪಾಯಿ
ರಸೀತಿ ಪಾವತಿಸಿದ್ದಕ್ಕೆ !?

ಸಂಸಾರಸ್ಥನಾಗಿ ಬಡ್ತಿ ಹೊಂದಿದವನ ಸಾಲುಗಳು “ಮೊದಲು – ನಂತರ” ಕವನದಲ್ಲಿ ಹೀಗಿದೆ -

ಮೊದಲ ಭೇಟಿಗಳಲ್ಲಿ
ನೀನು ಉಸುರಿದ ಆಸೆಗಳು
ಹೃದಯ ಸೇರಿ ಭದ್ರವಾದವು

ನಿನ್ನ ಈಗಿನ ಆಸೆಗಳು
ಹೃದಯ ಹತ್ತಿರದ ಕಿಸೆಗೂ
ನುಸುಳಿ ಖರ್ಚಿನ ರೂಪವಾದವು

ನನಗಿಷ್ಟವಾದ ಒಂದು ಹೃದಯಸ್ಪರ್ಶಿ ಹನಿಗವನ -

ಬೇಸಿಗೆಯ ಬಿರು ಬಿಸಿಲಿಗೆ
“ಬಾಡಿದ” ಹೂಗಳ ಯಾರೋ
ಚರ್ಚಿಸದೆ ಚೌಕಾಶಿಸದೆ ಕೊಂಡರು
ಮಾರುವವಳು “ಅರಳಿದಳು”

ಹೀಗೆ ಹಲವಾರು ಕವನಗಳು ಮನಸ್ಸಿಗೆ ತಾಗುತ್ತವೆ.




ಓದುಗರಿಗೆ ಅನುಕೂಲವಾಗಲೆಂದೇ ಸಂಕಲನದಲ್ಲಿ ಕವನಗಳನ್ನು ಕವನ-ಹನಿಗವನ, ತುಂತುರು, ಮಾಯೆ, ವಸಂತನ ಹಕ್ಕಿಗಳು, ಹೂ ಹಾಡು, ಆಗು ಹೋಗು, ಗಟ್ಟಿ ಕಾಲು ಮತ್ತು ಕಿರು ವಿಚಾರ ಎಂದು ಎಂಟು ಅಧ್ಯಯಗಳನ್ನಾಗಿ ವರ್ಗೀಕರಿಸಿದ್ದಾರೆ.


ಇದು ಕನ್ನಡ ಕವನಸಂಕಲನಗಳ ಸಂಕುಲಕ್ಕೆ ಮತ್ತೊಂದು ಉತ್ತಮ ಸೇರ್ಪಡೆಯಾಗಿದೆ.

Book - ಫೈಜ್ಞಟ್ರಾಜ್ ಬರೆದಿರುವ “ಮಗಳಿಗೆ ಹೇಳಿದ ಕಥೆಗಳು" Magalige Helida Kathegalu by FaizNatraj

 “ಪರಿಸರದಲ್ಲಿ ಕೋಟ್ಯಾಂತರ ಜೀವರಾಶಿಗಳಿವೆ. ಅವುಗಳೆಲ್ಲಾ ಮನುಷ್ಯರ ಹಿಂದೆ ಬಿದ್ದಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕೆ ಅವುಗಳ ಹಿಂದೆ ಬಿದ್ದಿದ್ದಾನೆ. “

ಇವು ಫೈಜ್ಞಟ್ರಾಜ್ ಬರೆದಿರುವ “ಮಗಳಿಗೆ ಹೇಳಿದ ಕಥೆಗಳು” ಮಕ್ಕಳ ಕಥಾಸಂಕಲನದ ʼಸೇಡು ಮರೆತ ಇರುವೆಗಳು!ʼ ಕಥೆಯ ಸಾಲುಗಳು.

ʼಮಗಳಿಗೆ ಹೇಳಿದ ಕಥೆಗಳುʼ ಇದರಲ್ಲಿ 18 ಕಥೆಗಳಿವೆ. ಹದಿನೆಂಟು ಕಥೆಗಳೂ ಮಕ್ಕಳಿಗಾಗಿಯೇ ಅಲ್ಲ ದೊಡ್ಡವರಿಗೂ ಒಂದಲ್ಲಾ ಒಂದು ಸಂದೇಶವನ್ನು ಕೊಡುತ್ತವೆ. ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ಅತ್ಯಮೂಲ್ಯವಾದ ಪರಿಸರವನ್ನು, ಪ್ರಕೃತಿಯನ್ನು ಲಘುವಾಗಿ ಪರಿಗಣಿಸುತ್ತಲೇ ಇರುತ್ತೇವೆ. ಇಲ್ಲಿ ಬಹುತೇಕ ಕಥೆಗಳು ಪರಿಸರ ಮತ್ತು ಪರಿಸರದ ಕಾಳಜಿಯ ಬಗ್ಗೆ ಬಗ್ಗೆ ಹೇಳುತ್ತವೆ. ಕೆಲವು ಕಥೆಗಳು ಕೊರೊನ ಕಾಲದಲ್ಲಿ ಹೊಳೆದಿರಬಹುದು, ಏಕೆಂದರೆ ಮನುಕುಲಕ್ಕೆ ಇರುವ ಮಿತಿ ಮೀರಿದ ಆಸೆಗೆ ಕಡಿವಾಣ ಹಾಕಲೆಂದೇ ಬಂದೆರಗಿದ ಕೊರೊನ ಸಾಂಕ್ರಾಮಿಕದ ಹಿನ್ನೆಲೆಯಿರುವ ಕಥೆಗಳಿವೆ.

ಫೈಜ್ನಟ್ರಾಟ್ ಅವರ ಕಥೆಗಳನ್ನು ಓದಿದಾಗ, ಅವರ ಕಥೆಗಳಲ್ಲಿ ಬರುವ ಕಾಡಿನ ಬಗ್ಗೆಯೇ ಆಗಲಿ, ಸುತ್ತಮುತ್ತಲಿನ ಪರಿಸರದ ಬಗ್ಗೆಯೇ ಆಗಲಿ ಕಣ್ಣಿಗೆ ಕಟ್ಟುವಂತೆ ವಿವರಿಸುವ ಪರಿ ಅವರು ತಮ್ಮ ಸುತ್ತ ಮುತ್ತಲಿನ ವಾತಾವರಣವನ್ನು, ಆಗುಓಗುಗಳನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ, ಪರಿಸರದ ಬಗ್ಗೆ ಎಷ್ಟೊಂದು ಕಾಳಜಿ ಇದೆ ಎನ್ನುವುದು ತಿಳಿಸುತ್ತದೆ. ಮಗಳಿಗೆ ಒಂದೊಂದು ಕಥೆಯನ್ನು ಹೇಳುತ್ತಾ ಹೇಳುತ್ತಾ ದೊಡ್ಡವರೂ ಯೋಚಿಸಲು ತೊಡಗುವಂತೆ ಮಾಡಿದ್ದಾರೆ.

ಈ ಕಥಾಸಂಕಲನವು ಮಕ್ಕಳ ಸಾಹಿತ್ಯ ಲೋಕಕ್ಕೆ ಒಂದು ಉತ್ತಮವಾದ ಸೇರ್ಪಡೆಯಾಗಿದೆ. ಕವಿ, ಸಾಹಿತಿ ಮತ್ತು ಉಪಾಧ್ಯಾಯರಾದ ಪ್ರಿಯ ಫೈಜ್ನಟ್ರಾಜ್ ರವರಿಗೆ ಶುಭಕಾಮನೆಗಳು

Book ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನ Ammana NudigaLu by Prema Bhat

ಜಗಲಿಯಲ್ಲಿ ಕುಳಿತಿದ್ದ ಮಗು ಅಳುತ್ತಿತ್ತು
ಹತ್ತಿರ ಹೋದೆ, ಮಗು ಇನ್ನಷ್ಟು ಬಿಕ್ಕಿ ಬಿಕ್ಕಿ ಅತ್ತಿತು
ಅರ್ಥವಾಗಲಿಲ್ಲ ಮಗು ಏಕೆ ಅಳುತ್ತಿ ಎಂದು
ಸ್ವಲ್ಪ ಹೊತ್ತಿನಲ್ಲಿ ಅದು ಎದ್ದು ಒಳ ನಡೆಯಿತು
ಅಮ್ಮ ಹೊರಬಂದಳು ಅವಳ ಕೈಲಿ ರೊಟ್ಟಿ ಇತ್ತು
ಅಮ್ಮ ರೊಟ್ಟಿಯನ್ನು ಹಸಿದಿದ್ದ ನಾಯಿಗೆ ಹಾಕಿದಳು
ಮಗು ತಟ್ಟನೆ ಅಳು ನಿಲ್ಲಿಸಿತು
ಮಗುವಲ್ಲಿರುವ ಮನಸ್ಸು
ಬೆಳೆದ ಮೇಲೆ ಏಕೆ ಸುಟ್ಟು ಹೋಗುತ್ತದೆ?

ಇದು ಹಿರಿಯ ಸಾಹಿತಿಗಳಾದ ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನದ ಒಂದು ಚೆಂದದ ಕವನ.

ಪ್ರಕಾಶಕರು: ಋತುಸೌರಭ ಫೌಂಡೇಶನ್.


Monday, July 22, 2024

Budget Session Expected to Be Stormy

   

The upcoming budget session is anticipated to be tumultuous, with intense debates and sharp disagreements predicted among lawmakers. Key issues fueling the expected storm include proposed changes to taxation, controversial spending cuts, and significant funding allocations to various sectors

Image

.


Opposition parties are gearing up to challenge several aspects of the proposed budget, arguing that it fails to address critical needs such as healthcare, education, and social welfare. Meanwhile, the ruling party defends the budget as a balanced approach to economic growth and fiscal responsibility.


Amidst the financial scrutiny, the session is also likely to see heated discussions on policy reforms and accountability measures. The public and media are closely watching, expecting spirited exchanges that could shape the nation’s financial and policy landscape for years to come.